ಕೀರ್ತನೆ - 728     
 
ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಶ್ರೀ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ ವಿಭೀಷಣನ ಮನಗೆ ಶ್ರೀ ರಾಮ ಬಂದಂತೆ ನಿನ್ನ ನಾಮವು ಬಂದು ಎನ್ನ ನಾಲಗೆಯಲಿ ನಿಂದು ಸಲಹಲಿ ಶ್ರೀ ಪುರಂದರ ವಿಠಲ.