ಕೀರ್ತನೆ - 719     
 
ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ ಮೋದದಿಂ ಸಲಿಸುವ ಮನದಿಷ್ಟವ ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ ಮಾಧವನೇ ನೇಮಿಸಿಪ್ಪ ಈ ಅಧಿಕಾರವ ಆದರದಿಂದ ಅವರವರೊಳು ನಿಂದು ಭೇದಗೊಳಿಸದೆ ಕಾರ್ಯಮಾಳ್ವ ಪುರಂದರವಿಠಲ