ಕೀರ್ತನೆ - 714     
 
ಸಿರಿ ನಾರಾಯಣ ಯೋಗಿ ಶ್ರೀ ಪಾದರಾಯರಲ್ಲಿ ವರವಿದ್ಯಾಭ್ಯಾಸವ ಮಾಡಿದೆ ನೀನು ಧರೆಯೊಳು ವಿಜಯೀಂದ್ರ-ವಾದಿರಾಜರೆಂಬ ಪರಮಶಿಷ್ಯರ ಪಡೆದು ಮೆರೆದ ಕೀರುತಿಯ: "ಸುರೇಂದ್ರರು ಪುತ್ರ ಭಿಕ್ಷೆ ಬೇಡೆ ವಿಜಯೀಂದ್ರನ ಕರುಣಿಸಿ ಮಠವನುದ್ಧರಿಸಿದ ಕಾರಣ ಗುರುವ್ಯಾಸರಾಯರೆ ಪರಮ ಗುರುಗಳು ಪುರಂದರ ವಿಠಲ ಪರದೈವ ಜಗಕೆ ಕಾಣಿರೊ