ಕೀರ್ತನೆ - 713     
 
ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ - ವ್ಯಾಸರಾಯನೆಂಬ ಪೆಸರು ನಿನಗೆಂದಂತೆ ದೇಶಾಧಿಪಗೆ ಬಂದ ಕುಹುಯೋಗವನು ನೂಕಿ- ನೀ ಸಿಂಹಾಸನವೇರಿ ಮೆರೆದೆ ಜಗವರಿಯೆ: ವ್ಯಾಸಾಬ್ಧಿಯನು ಬಲಿಸಿ ಕಾಶೀದೇಶದೊಳೆಲ್ಲ ಭಾಸುರ ಕೀರ್ತಿಯನು ಪಡೆದೆ ನೀ ಗುರು ರಾಯ ವಾಸುದೇವ ಪುರಂದರ ವಿಠಲನ ದಾಸರೊಳು ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು