ಕೀರ್ತನೆ - 711     
 
ಅಂಕಿತವಿಲ್ಲದ ದೇಹ ನಿಷೇಧ ಅಂಕಿತವಿಲ್ಲದ ಕಾವ್ಯ ಶೋಭಿಸದು ಅಂಕಿತವಿಲ್ಲದೆ ಇರಬಾರದೆಂದು ಚ- ಕ್ರಾಂಕಿತವನು ಮಾಡಿ ಎನ್ನಂಗಕೆ ಪಂಕಜ ನಾಭ ಶ್ರೀ ಪುರಂದರ ವಿಠಲನ ಅಂಕಿತವೆನಗಿತ್ತ ಗುರವ್ಯಾಸ ಮುನಿ ರಾಯ