ಕೀರ್ತನೆ - 708     
 
ಶ್ರೀಪತಿಯ ನಾಭಿಯಿಂದ ಅಜ ಜನಿಸಿದನು ಅಜನ ಮಾನಸ ಪುತ್ರರೇ ಸನಕಾದ್ಯರು ಸನಕಾದ್ಯರ ಶಿಷ್ಯರೇ ದೂರ್ವಾಸರು ದೂರ್ವಾಸರ ಶಿಷ್ಯರೇ ಪರತೀರ್ಥರು ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು ಸತ್ಯಪ್ರಜ್ಞರತೀರ್ಥರೆ ಪ್ರಾಜ್ಞತೀರ್ಥರು ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತ ಪ್ರೇಕ್ಷರು ಅಚ್ಯುತ ಪ್ರೇಕ್ಷರ ಕರ ಸಂಜಾತರೇ ಪೂರ್ಣಪ್ರಜ್ಞರು ಪೂರ್ಣ ಪ್ರಜ್ಞರೇ ನಮ್ಮ ಭಾಷ್ಯಕಾರರು ಭಾಷ್ಯಕಾರರೇ ನಮ್ಮ ಗುರು ಮುಖ್ಯಪ್ರಾಣರು ಗುರುಮುಖ್ಯ ಪ್ರಾಣಪತಿ ನಮ್ಮ ಪುರಂದರವಿಠಲ