ಕೀರ್ತನೆ - 695     
 
ಜಲದನೀಲಗಾತ್ರ ಏತರ ಚೆಲುವ ರುಕ್ಕಿಣಿ ಬಿಳಿಯ ಜಡೆಯ ಮೈಯ ಜೋಗಿಗೊಲಿದ ಪಾರ್ವತಿ ಉದಕದೊಳಗೆ ವಾಸವೇಕೆ ಸದನವಿಲ್ಲವೆ | ಸುದತಿ ಸುಡುವ ಕಾಡಿಗಿಂತ ಲೇಸು ಅಲ್ಲವೆ ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ | ಗಂಗೆಯ ಶಿರದಿ ಪೊತ್ತವನ ಗರುವ ಕೇಳಿದೆ ವಸುಧೆ ನೆಗಹಿ ಬೇರ ಮೆಲುವ ಅಶನವಿಲ್ಲವೆ ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ ಕರುಳ ಕೊರಳ ಸರವು ಏಕೆ ಸರವು ದೊರಕದೆ ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆ ನರಕಪಾಲ ಪಿಡಿವ ಜಗದ ಕರ್ತೃವಲ್ಲವೆ ಮಾತೆಶಿರವ ಅಳಿದವನ ಮಾತ ಕೇಳಿದೆಯಾ ! ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ ಕೋತಿಗಳನ್ನು ಕೂಡಲಿಕ್ಕೆ ಜಾತಿ ತನ್ನದೆ ಭೂತಗಣಗಳಾಳುವುದಕೆ ಭೀತಿ ಇಲ್ಲವೆ ಹತ್ತಿರಿದ್ದ ವಾಜಿಬಿಟ್ಟು ಹದ್ದನೇಲ್ವರೆ | ಎತ್ತಿನ ಬೆನ್ನನೇರಿದವರು ಉತ್ತಮರಾಹರೆ ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ ಶಾಪ ಹತ್ತಲಿಲ್ಲವೆ ಹರಿಹರರೊಳು ಭೇದವೇನು ಹೇಳೆ ರುಕ್ಕಿಣಿ ಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ