ಕೀರ್ತನೆ - 692     
 
ಇದೀಗ ಭಕುತಿಯು ಮ- ತ್ತಿದೀಗ ಮುಕುತಿಯು ಮಧುದ್ವಿಷನ ಪದಕಮಲಕೆ ಮಧುಪನಂತೆ ಎರಗುತಿಹುದು ಶ್ರೀಕಾಂತಮೂರುತಿ ಬಾಹ್ಯಾಂತರದಿ ಏಕಾಂತದಿ ನೆನೆದಾನಂದ ತುಳುಕಾಡಿ | ಮುಖ ವಿಕಾಸದಿ ತನುವ ಮರೆದು ವಿಕಳ ಭಾವದಿ ಉಬ್ಬುಬ್ಬಿ ಕುಣಿವುದು ಡಂಭವ ಸಾರುವರತ್ತತ್ತ ಜಡಿದು ಕುಂಭಕ ರೇಚಕ ಪೂರಕವಿಡಿದು || ಅಂಬುಧಿಶಾಯಿ ಪದಾಂಬುಜ ವೀಕ್ಷಿಸಿ ಬಿಂಬವ ಕಾಂಬುವ ಹಂಬಲವಿಡಿವುದು ಕಂಡವರ ಕಾಲಿಗೆ ಕುಮನುಜರಿಗೆ ಮಂಡೆಯ ಬಾಗದೆ ಪರೇಶ ಕೊಟ್ಟಷ್ಟು ॥ ಉಂಡು ಸಜ್ಜನರ ಕಂಡು ಸುಖಿಸಿ ಪಾ ಷಂಡ ಸಂಭಾಷಣೆ ಸೋಕದೆ ಬಾಳ್ವುದು ತಪುತರ - ಕಂಬುಲಾಂಛನ ಪಿಡಿದು ಗುಪಿತ ಮಂತ್ರಗಳೊರೆವ ಗುರುಗ ಳುಪದೇಶ ಕ್ರಮವ ಮೀರದೆ ಇತರ ಪಟ ಬಿಟ್ಟು ನಲಿದು ಸುಖಿಪುದು ಸಮಗ್ರ ದಾಸ ಸಾಹಿತ್ಯ - ಸಂಪುತ ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತ ಸದ್ವಿಷ್ಟು ಸಚ್ಛಾಸ್ತ್ರ ಹೇಳುತ ಕೇಳುತ | ದುಗ್ಧ ಸಮುದ್ರೇಶ ಪುರಂದರವಿಠಲಗೆ ಇದ್ದ ಸಂಪದವ ತಪ್ಪದೆ ಒಪ್ಪಿಸುವುದು