ಶೋಭನವೆ ಹರಿ ಶೋಭನವೆ
ಶೋಭನವೆನ್ನಿರಿ ಶುಭಕರದಿಂದಲಿ
ಶೋಭನ ಶ್ರೀಲೋಲ ಗೋಪಾಲನೆನ್ನಿರಿ
ಪಾಲಗಡಲು ಮನೆಯಾಗಿರಲು
ಆಲದೆಲೆಯ ಮೇಲೆ ಮಲಗುವರೆ |
ಮೂಲೋಕವೇ ನಿನ್ನುದರದೊಳಿರಲು
ಬಾಲಕನಾಗಿ ಎತ್ತಿಸಿಕೊಂಬುವರೆ
ಸಿರಿ ನಿನ್ನ ಕೈವಶವಾಗಿರಲು
ತಿರುಮಲ ಮಲೆಯನ್ನು ಸೇರುವರೆ ॥
ಸರಸಿಜಭವ - ಭವ ನಿನ್ನ ಪೂಜಿಸಲು
ನರನ ಬಂಡಿಯ ಬೋವನೆನಿಸುವರೆ
ಕಮ್ಮಗೋಲನ ಪಿತನಾಗಿರಲು
ಗಮ್ಮನೆ ಕುಬುಜೆಗೆ ಸೋಲುವರೆ ॥
ಬ್ರಹ್ಮ ಪರಬ್ರಹ್ಮ ಚರಣಕೆ ಶರಣು
ಹಮ್ಮಿನ ದೈವ ಶ್ರೀ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು