ಕೀರ್ತನೆ - 688     
 
ವಾಯುಕುಮಾರಗೆ ಮಂಗಳ ರಘು - । ರಾಯಸೇವಕಗೆ ಮಂಗಳ ಅಂಜನಿಗರ್ಭಸಂಜಾತಗೆ ಮಂಗಳ 1 ರಂಜಿತ ದಿವ್ಯ ಮೂರ್ತಿಗೆ ಮಂಗಳ | ಮಂಜುಳ ಕೀರ್ತಿ ಮಾಹಾತ್ಮಗೆ ಮಂಗಳ 1 ಸಂಜೀವರಾಯಗೆ ಮಂಗಳ ದನುಜನಿಕರ ಸಂಹಾರಗೆ ಮಂಗಳ | ಜಾನಕಿ ಶೋಕ ವಿನಾಶಗೆ ಮಂಗಳ || ವನಧಿ ನಿರೋಧಿಗೆ ಮಂಗಳ ಜಯ | ಹನುಮವಿಲಾಸಗೆ ಮಂಗಳ ಸೇತುವೆಗಟ್ಟಿದಾತಗೆ ಮಂಗಳ ಸೀತೆಯ ತಂದ ಬಂಟಗೆ ಮಂಗಳ || ಖ್ಯಾತ ಪುರಂದರವಿಠಲನ ಕರುಣೆಗೆ ಪಾತ್ರನಾದ ಭಕುತಗೆ ಮಂಗಳ