ಲಾಲಿ ತ್ರಿಭುವನ ಪಾವನ ಲಾಲಿ
ಗೋವಳ ಕುಲದೊಳು ಪುಟ್ಟಿದಗೆ ಲಾಲಿ
ಗೋವರ್ಕಳನು ಸಲಹಿದಗೆ ಲಾಲಿ |
ಗೋವುಗಳನೆಲ್ಲ ಕಾಯ್ದವಗೆ ಲಾಲಿ
ಗೋವಿಂದ ಪರಮಾನಂದಗೆ ಲಾಲಿ
ನಖದಲಿ ಗಂಗೆಯ ಪಡೆದಗೆ ಲಾಲಿ
ಶಕಟನ ಮುರಿದು ಒತ್ತಿದವಗೆ ಲಾಲಿ ||
ಅಖಿಳ ವೇದಂಗಳ ತಂದಗೆ ಲಾಲಿ
ರುಕುಮಿಣಿಯರಸ ವಿಠಲನಿಗೆ ಲಾಲಿ
ಗಗನವ ಮುರಿದು ಒತ್ತಿದಗೆ ಲಾಲಿ
ನಿಗಮಗಳನು ತಂದಿತ್ತಗೆ ಲಾಲಿ ||
ಹಗೆಗಳನೆಲ್ಲರ ಗೆಲಿದಗೆ ಲಾಲಿ
ಜಗವನು ಉದರದಿ ಧರಿಸಿದಗೆ ಲಾಲಿ
ಬೊಟ್ಟಿಲಿ ಬೆಟ್ಟವನೆತ್ತಿದಗೆ ಲಾಲಿ
ಮೆಟ್ಟಿಲಿ ಭೂಮಿಯನಳೆದಗೆ ಲಾಲಿ ||
ಜಟ್ಟಿಗರನೆಲ್ಲ ಗೆಲಿದಗೆ ಲಾಲಿ
ಕಟ್ಟುಗ್ರ ಶ್ರೀ ನರಸಿಂಹಗೆ ಲಾಲಿ
ಶರಧಿಗೆ ಸೇತುವೆಗಟ್ಟಿದಗೆ ಲಾಲಿ
ಸುರರ ಸೆರೆಯನು ಬಿಡಿಸಿದಗೆ ಲಾಲಿ ॥
ಕರಿಮೊರೆಯಿಡಲು ಬಂದೊದಗಿದಗೆ ಲಾಲಿ
ವರದ ಪುರಂದರವಿಠಲಗೆ ಲಾಲಿ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು