ಕೀರ್ತನೆ - 683     
 
ಮಂಗಳಂ ಮಾರಮಣಗೆ ಮಂಗಳಂ ನೀರೊಳು ಮುಳುಗಿ ನಿಗಮ ತಂದವಗೆ ಘೋರರೂಪದಿ ಕಂಬದೊಳ್ ಬಂದವಗೆ ಪೊಡವಿಯನೀರಡಿ ಮಾಡಿದ ದೇವಗೆ ಕೊಡಲಿಯ ಕರನಾಗಿ ಜನಿಸಿದವಗೆ ಮಡದಿ ಸಹಿತ ವನವಾಸದೊಳಿದ್ದವಗೆ ಬಿಡದೆ ಪಾಂಡವಭೃತ್ಯನಾದವಗೆ ಭರದಲಿ ಸತಿಯರ ವ್ರತಗೆಡಿಸಿದವಗೆ ಧುರದಲಿ ತುರಗವನೇರಿದವಗೆ ಗಿರಿಜಾಪುರದೊಳು ವಾಸವಿದ್ದವಗೆ ವರದ ಶ್ರೀ ಪುರಂದರವಿಠಲಗೆ