ಮಂಗಳ ಮಾರಮಣಗೆ ಮಂಗಳ ಜಯ
ಮಂಗಳ ಭೂರಮಣಗೆ ಮಂಗಳ
ಮುಕುಟಕೆ ಮಂಗಳ ಮತ್ಸ್ಯಾವಾತಾರಗೆ
ಮುಖಕೆ ಮಂಗಳ ಮುದ್ದು ಕೂರ್ಮನಿಗೆ ॥
ಸುಕಂಠಕೆ ಮಂಗಳ ಸೂಕರರೂಪಗೆ
ನಖಕೆ ಮಂಗಳ ಮುದ್ದು ನರಸಿಂಹಗೆ
ವಕ್ಷಕೆ ಮಂಗಳ ವಟವಾಮನನಿಗೆ
ಪಕ್ಷಕೆ ಮಂಗಳ ಭಾರ್ಗವಗೆ ||
ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ
ಉರುಗಳಿಗೆ ಮಂಗಳ ಉತ್ತಮ ಬುದ್ಧಗೆ
ಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ॥
ಪರಿಪರಿ ರೂಪಗೆ ಪರಮ ಮಂಗಳ
ಪುರಂದರವಿಠಲಗೆ ಶುಭಮಂಗಳ