ಕೀರ್ತನೆ - 681     
 
ಮಂಗಳಂ ಜಯ ಮಂಗಳಂ. ನಿಗಮವ ತಂದಾ ಮತ್ಸ್ಯನಿಗೆ ನಗವ ಬೆನ್ನಲಿ ಮೊತ್ತ ಕೂರ್ಮನಿಗೆ 11 ಜಗವನುದ್ಧರಿಸಿದ ವರಹಾವತಾರಗೆ ಮಗುವನು ಕಾಯ್ದ ಮುದ್ದು ನರಸಿಂಹಗೆ ಭೂಮಿಯ ದಾನವ ಬೇಡಿದಗೆ ಆ ಮಹಾಕ್ಷತ್ರಿಯರ ಗೆಲಿದವಗೆ || ರಾಮಚಂದ್ರನಾದ ಸ್ವಾಮಿಗೆ ಸತ್ಯ ಭಾಮೆಯರಸ ಗೋಪಾಲಕೃಷ್ಣಗೆ ಬತ್ತಲೆ ನಿಂತಿಹ ಬುದ್ಧನಿಗೆ ಉತ್ತಮ ಹಯವೇರಿದ ಕಲ್ಕಿಗೆ ಹತ್ತವತಾರದಿ ಭಕ್ತರ ಸಲಹುವ ಸತ್ಯ ಶ್ರೀ ಪುರಂದರವಿಠಲನಿಗೆ