ಕೀರ್ತನೆ - 680     
 
ಮಂಗಳಂ ಜಯ ಮಂಗಳಂ ಜಯ ಜಯ ಮಂಗಳ ಹರಿಗೆ ಜಯ ಜಯ ಮಂಗಳ ಸಿರಿಗೆ ಜಯ ಜಯ ವರದ ಪುರಂದರವಿಠಲಗೆ ಜಯ ವಾಸುದೇವನ ಸುತಗೆ ಜಯ ಜಯ ಭೀಷ್ಮಕ ಸುತೆಗೆ ಜಯ ಜಯ ದಂಪತಿ ವರದ ಪುರಂದರವಿಠಲಗೆ ಜಯ ಜಯ ದಶರಥ ಸುತಗೆ ಜಯ ಜಯ ಜನಕನ ಸುತೆಗೆ ಜಯ ಜಯ ದಂಪತಿ ವರದ ಪುರಂದರವಿಠಲಗೆ ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ ಪರಮಾನಂದವು ವರದ ಪುರಂದರವಿಠಲಗೆ ಶುಭವಿದು ಶೋಭನ ಹರಿಗೆ ಶುಭವಿದು ಶೋಭನ ಸಿರಿಗೆ ಶುಭವಿದು ಶೋಭನ ವರದ ಪುರಂದರವಿಠಲಗೆ