ಕೀರ್ತನೆ - 669     
 
ದೇವಕಿಯುದರ ಸಂಜಾತನೆ ತ್ರುವಿ ಕಾವನ ಪಿತ ಕಮಲಾಕ್ಷನೆ ತ್ರುವಿ ಶ್ರೀ ವೈಭವ ಸಚ್ಚಿದಾನಂದ ತ್ರುವಿ ಭಾವಕಿ ಗೋಪಿಯ ಕಂದನೆ ತ್ರುವಿ ಮಧುರೆಯೊಳುದಿಸಿದ ಮಹಿಮನೆ ಜೋ ಜೋ ಯದುಕುಲ ತಿಲಕ ಯಾದವರಾಯ ಜೋ ಜೋ || ಮಧುಕೈಟಭಮುರಮರ್ದನ ಜೋ ಜೋ ಚದುರನಾಗಿ ತುರುಗಳ ಕಾಯ್ದೆ ಜೋ ಜೋ. ಗೋಕುಲಪಾಲಕ ಗೋವಿಂದ ತ್ರುವಿ. ಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ॥ ಪಾಕಶಾಸನ ಮುಖ್ಯ ಸುರವಂದ್ಯ ತ್ರುವಿ ಲೋಕವೀರೇಳ ಪೆತ್ತಾತನೆ ತ್ರುವಿ ಶ್ರುತಿಚೋರ ಸಂಹಾರಕ ದೇವ ಜೋ ಜೋ ಜತನದಿ ಸುರರಿಗಮೃತವಿತ್ತೆ ಜೋ ಜೋ ॥ ಕ್ಷಿತಿಯ ಕದ್ದೊಯ್ದನ ಸೀಳೆ ನೀ ಜೋ ಜೋ ಮತಿಯುತ ಬಾಲಕನತಿ ರಕ್ಷ ಜೋ ಜೋ ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿ ಯತಿವಂಶ ಜನನ ಭಾರ್ಗವ ರೂಪ ತ್ರುವಿ ॥ ಕ್ರತುವ ರಕ್ಷಕ ಕಾಕುಸ್ಥನೆ ತ್ರುವಿ ರತಿಪತಿಪಿತ ಸುರನುತ ಕೃಷ್ಣ ತ್ರುವಿ ಗೋಪಿಕಾನಂದ ಮುಕುಂದನೆ ಜೋ ಜೋ ಭೂಪರೊಳ್ಕಾದಿ ಬಳಲಿದನೆ ಜೋ ಜೋ ಶ್ರೀ ಪುರುಷೋತ್ತಮ ನರಸಿಂಹ ಜೋ ಜೋ ಅಪಾರ ಮಹಿಮಾರ್ಣವ ದೇವ ಜೋ ಜೋ ಮಣ್ಣೊಳಗಾಡಿ ನೀ ಬಂದೆಯ ತ್ರುವಿ ಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿ ಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿ. ಚಿಣ್ಣ ಸುಮ್ಮನೆ ಇರು ಶ್ರೀಕೃಷ್ಣ ತುವಿ ತ್ರುವಿ ತಾರಕ ಸತಿವ್ರತಹಾರಕ ಜೋ ಜೋ ವಾರಣ ಹಯವೇರಿ ಮೆರೆದನೆ ಜೋ ಜೋ ।। ಸಾರಿದವರ ಸಂತೈಸುವ ಜೋ ಜೋ ಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ ಶರಣಾಗತ ವಜ್ರಪಂಜರ ತ್ರುವಿ ಕರುಣಾಕರ ಕಮಲಾಕ್ಷನೆ ತ್ರುವಿ ॥ ಧರಣಿಧರಶಾಯಿ ಶ್ರೀ ವರ ತ್ರುವಿ ॥ ವರದ ಶ್ರೀ ಪುರಂದರವಿಠಲನೆ ತ್ರುವಿ ತ್ರುವಿ