ಕೀರ್ತನೆ - 662     
 
ಜಯಮಂಗಳಂ ನಿತ್ಯ ಶುಭಮಂಗಳಂ ಮಂಗಳವು ಆನಂದತೀರ್ಥ ಗುರುರಾಯರಿಗೆ ಮಂಗಳವು ಮಧುರವಾಕ್ಯ ಸುಭಾಷ್ಯಗೆ ಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆ ಸಂಜೀವಿನಿಯ ತಂದ ಹನುಮಂತಗೆ ಸಂಜೆಯಲಿ ಲಂಕಿಣಿಯನಂಜಿಸಿ ಪೊಕ್ಕ ಪ್ರ ಭಂಜನನ ಕುವರ ಮಂಜುಳವಾಕ್ಯಗೆ ದ್ವಾಪರದಿ ಕುಂತಿಯೊಳ್ ಪರ್ವತದಿ ಜನಿಸಿದಗೆ ಪಾಪಿ ಜರಾಸಂಧನನು ಸೀಳ್ದವಗೆ | ದ್ರೌಪತಿಯ ಸೌಗಂಧಿ ಕುಸುಮವನು ತಂದವಗೆ ಶ್ರೀಪತಿಯ ದಾಸ ಶ್ರೀ ಭೀಮಸೇನನಿಗೆ ಕಲಿಯುಗದಿ ಶಂಕರನ ದುರ್ಮತವ ತರಿದವಗೆ ಖಳ ಬೌದ್ಧ ಚಾರ್ವಾಕ ಮತವ ಗೆಲಿದವಗೆ | ಒಲಿದು ಸಚ್ಛಾಸ್ತ್ರವನು ಸಾಧುಗಳಿಗೊರೆದವಗೆ ಸುಲಭ ಪುರಂದರವಿಠಲನ ದಾಸಗೆ