ಕೀರ್ತನೆ - 661     
 
ಜಯಮಂಗಳಂ ನಿತ್ಯ ಶುಭಮಂಗಳಂ ।। ಶ್ರೀವತ್ಸಲಾಂಛನಗೆ ಕ್ಷೀರಾಬ್ಧಿವಾಸಗೆ । ಗೋವರ್ಧನೋದ್ಧಾರ ಗೋವಿಂದಗೆ | ಮಾವ ಕಂಸನ ಕೊಂದು ಮಕರಕುಂಡಲ ಧರಿಸಿ । ಜೀವಾತ್ಮನಾದ ಚಿನ್ಮಯರೂಪಗೆ ಅಂಬುಧಿಯ ಶಯನಗೆ ಅಖಿಲ ಭೂತೇಶಗೆ ತುಂಬುರ ನಾರದ ಮುನಿವಂದ್ಯಗೆ || ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು । ಗೊಂಬೆಯನು ಮಾಡಿ ಕುಣಿಸುವ ದೇವಗೆ ಕಂದರ್ಪನಯ್ಯನಿಗೆ ಕೋಟಿಲಾವಣ್ಯನಿಗೆ ಸುಂದರಮೂರುತಿ ಹರಿ ಸರ್ವೋತ್ತಮನಿಗೆ ॥ ಕಂದ ಪ್ರಹ್ಲಾದನ ಕಾಯ್ದ ದೇವನಿಗೆ ಅರ | ------------------------------------------- ಪನ್ನಂಗಶಯನಗೆ ಪಾವನ್ನ ಚರಿತಗೆ । ಸನ್ನುತರಾದ ಸಜ್ಜನ ಪಾಲಗೆ | ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ ತನ್ನ ನಂಬಿದವರನು ಸಲಹುವವಗೆ ಕರಿರಾಜವರದಗೆ ಕರುಣಾಸಮುದ್ರಗೆ | ಗರುಡಗಮನನಿಗೆ ವೈಭವಹಾರಗೆ ವರಪುರಂದರವಿಠಲ ಕಂಬುಕಂದರನಿಗೆ ಅರವಿಂದನಾಭನಿಗೆ ಅಜನ ಪಿತಗೆ