ಜಯಮಂಗಳಂ ನಿತ್ಯ ಶುಭಮಂಗಳಂ
ಕುರುರಾಯ ಸಭೆಯೊಳಗೆ ಕುಳಿತು ದ್ರೌಪದಿಯನೆಳ 1
ತರಿಸಿ ಭೀಷ್ಮಾದಿಕರು ನೋಡುತಿರಲು ||
ಸೆರಗನ್ನು ಹಿಡಿದು ಸೀರೆಯ ಸೆಳೆಯೆ ದ್ರೌಪದಿಯ ।
ಮೊರೆಕೇಳಿ ಕಾಯ್ದ ಶ್ರೀ ಮುರವೈರಿಗೆ
ಪಾಪಿ ದುರ್ಯೋಧನನು ಪಾಂಡುನಂದನರೊಡನೆ |
ನೀ ಪಾಲುಕೊಡುಯೆಂದು ಕೇಳಲಾಗಿ 1
ಕೋಪದಲಿ ಕೊಡೆನೆನಲು ಇಳೆಯಲೊರಗಿಸಿ ವಿಶ್ವ |
ರೂಪವನು ತೋರಿಸಿದ ಗೋಪಾಲಗೆ
ವಸುಧೀಶ ಧರ್ಮಜನ ಓಲಗದಿ ತಾನಿರಲು 1
ಶಿಶುಪಾಲ ನಿಂದಿಸಲು ಶೀಘ್ರದಿಂದ ||
ಅಸಮಾನ ಚಕ್ರದಲಿ ಅವನ ತಲೆ ಖಂಡಿಸಿದ |
ವಸುದೇವ ದೇವಕೀ ವರಪುತ್ರಗೆ
ಗರುಡವಾಹನವೇರಿ ತೆರಳಿ ಶೋಣಿತಪುರಕೆ
ಹರಭಕ್ತ ಬಾಣಾಸುರನ ಕರಗಳ ||
ತೆರೆದಿಟ್ಟು ಹರುಷದಲಿ ತನ್ನ ಮೊಮ್ಮನ ಕಾಯ್ದ |
ಉರಗಾತ್ಮ ಭೂ ಸಕಲ ಸುರರೊಡೆಯಗೆ
ಸುರಗಿರಿಯ ಸುತ್ತುವಾ ತರಣಿನಂದನನ ಆ ।
ಉರಗಬಾಣಕೆ ತನ್ನ ಪಾಂಡುನಂದನನು ||
ಗುರಿಯಾಗದಂತೆ ಸತ್ಕರುಣದಲಿ ರಕ್ಷಿಸಿದ
ವರಮೂರ್ತಿ ಶ್ರೀ ಪುರಂದರವಿಠಲಗೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು