ಜಯಮಂಗಳಂ ನಿತ್ಯ ಶುಭಮಂಗಳಂ
ಜಯ ತುಂಗ ಲಕ್ಷ್ಮೀಪತಿ ನರಸಿಂಹಗೆ
ಕಂದರ್ಪನಯ್ಯಗೆ ಕೋಟಿಲಾವಣ್ಯಗೆ
ಮಂದರೋದ್ಧಾರ ಮಧುಸೂದನನಿಗೆ
ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ
ಇಂದಿರಾ ರಮಣ ಸರ್ವೋತ್ತಮನಿಗೆ
ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆ
ಸರಸಿಜೋದ್ಭವ - ಭವವಂದ್ಯ ಹರಿಗೆ ||
ಗಿರಿಯರಸು ಕಾವೇರಿಪುರದ ರಂಗಯ್ಯಗೆ
ಗಿರಿರಾಜಪತಿವಂದ್ಯ ಸುರರ ನಿಧಿಗೆ
ಅಂಬರೀಷನ ಶಾಪ ಅಪಹರಿಸಿದವನಿಗೆ
ತುಂಬುರ ನಾರದ ಮುನಿವಂದ್ಯಗೆ ||
ಕಂಬುಕಂಧರ ಪುರಂದರ ವಿಠಲರಾಯಗೆ
ಅಂಬುಜನಾಭಗೆ ಅಜನಪಿತಗೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು