ಕೀರ್ತನೆ - 656     
 
ಕೋಳಿ ಕೂಗಿತಲ್ಲಾ - ಲಕ್ಷ್ಮೀ ಲೋಲನಲ್ಲದೆ ಅನ್ಯರಾರಿಲ್ಲವೆಂದು ಮೊದಲ ಜಾವದಲಿ ಮುಕುಂದನೆಂದು ಕೂಗಿ ಎರಡರಲಿ ಶ್ರೀ ವೆಂಕಟಾದ್ರಿಯೆಂದು || ಉರಗಗಿರಿಯ ವಾಸ ಯಾದವ ಕುಲ ಗೊಲ್ಲ ಚದುರ ಚಲ್ಲಪಿಲ್ಲಿರಾಯನಲ್ಲದಿಲ್ಲವೆಂದು ಮೂರು ಜಾವದಲಿ ಮುರಾರಿಯೆಂದು ಕೂಗಿ ನಾಕರಲಿ ನಾರಾಯಣಯೆನಲು || ಕ್ಷೀರಾಬ್ಧಿಯವಾಸ ಲಕ್ಷ್ಮೀಪತಿ ಕೋ ನೇರಿವಾಸ ವೆಂಕಟಕೃಷ್ಣರಾಯನೆಂದು ಪರಮಪುರುಷ ಮುಖ್ಯ ಆಧಾರಭೂತ ಕರುಣದ ಪುಂಜನು ಜಗದಾದಿ ತಾ | ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿ ವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದು ಕೊಕ್ಕನು ಮೇಲೆ ನೆಗಹಿಕೊಳುತ | ಚಕ್ಕನೆ ಕೇರಿ ಕೇರಿಯಗುಂಟ ಸಾಗುತ ಮುಕುಂದನಲ್ಲದೆ ಅನ್ಯರಾರಿಲ್ಲವೆಂದು ಐದು ಜಾವದಲಿ ಅನಂತನೆಂದು ಕೂಗಿ ಆರರಲ್ಲಿ ಅಳಗಾದ್ರೀಶಯೆಂದು | ಏಳರಲ್ಲಿ ಕಾಶಿಯ ಬಿಂದುಮಾಧವ ಎಂಟಕೆ ಪುರಂದರವಿಠಲರಾಯನೆಂದು