ಕೀರ್ತನೆ - 654     
 
ಏಳಯ್ಯ ಶ್ರೀಹರಿ ಬೆಳಗಾಯಿತು. ಏಳು ದೇವಕಿತನಯ ನಂದನಕಂದ ಏಳು ಗೋವರ್ಧನ ಗೋವಳರಾಯ || ಏಳು ಮಂದರಧರ ಗೋವಿಂದ ಫಣಿಶಾಯಿ ಏಳಯ್ಯ ನಲಿದು ಉಪ್ಪವಡಿಸಯ್ಯ ಕ್ಷೀರಸಾಗರವಾಸ ಬೆಳಗಾಯಿತು ಏಳು ಮೂರುಲೋಕದರಸು ಒಡೆಯ ಲಕ್ಷ್ಮೀಪತಿ ॥ ವಾರಿಜನಾಭನೆ ದೇವದೇವೇಶನೆ ಈರೇಳು ಲೋಕಕಾಧಾರ ಶ್ರೀ ಹರಿಯೇ ಸುರರು ದೇವತೆಗಳು ಅವಧಾನ ಎನುತಿರೆ ಸುರವನಿತೆಯರೆಲ್ಲ ಆರತಿ ಪಿಡಿದಿರೆ ॥ ನೆರೆದು ಊರ್ವಶಿ ಭರದಿ ನಾಟ್ಯವಾಡಲು ಕರುಣಿಸೊ ಪುರಂದರವಿಠಲ ನೀನೇಳೋ