ಕೀರ್ತನೆ - 652     
 
ಏಕಾರತಿಯನೆತ್ತುವ ಬನ್ನಿ ನಮ್ಮ ಲೋಕನಾಥನ ಸಿರಿ ಪಾದವ ಬೆಳಗುವ ತುಪ್ಪದೊಳ್ಬೆರೆಸಿದ ಮೂರು ಬತ್ತಿಯನಿಟ್ಟು ಒಪ್ಪುವ ದೀಪಕ್ಕೆ ದೀಪ ಹಚ್ಚಿ ॥ ತಪ್ಪದೆ ಸಕಲ ಪಾಪಂಗಳ ಹರಿಸುವ ಅಪ್ಪ ವಿಠಲನ ಪದಾಬ್ಜವ ಬೆಳಗುವ ಹರುಷದಿ ಏಕಾರತಿ ಬೆಳಗಿದ ಫಲ ನರಕದಿಂದುದ್ಧಾರ ಮಾಡುವುದು || ಪರಮಭಕುತಿಯಿಂದ ಬೆಳಗುವ ನರರನು ಹರಿ ತನ್ನ ಹೃದಯದಿ ಧರಿಸುವನಯ್ಯ ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮ ತನ್ಯ ದೇವರನು ಸ್ಮರಿಸದೆ ಅ | ನನ್ಯವಾಗಿ ಶ್ರೀ ಪುರಂದರವಿಠಲನ ಪುಣ್ಯನಾಮಗಳ ಧ್ಯಾನಿಸುತ