ಕೀರ್ತನೆ - 648     
 
ಆರತಿಯ ಬೆಳಗಿರೆ ಅರಸಿ ರುಕ್ಕಿಣಿ ಕೂಡ ಅರಸು ವಿಠಲಗೆ ಬಿರುದಿನ ಶಂಖವ ಪಿಡಿದ ವಿಠಲಗೆ | ಸರಸಿಜಸಂಭವ ಸನ್ನುತ ವಿಠಲಗೆ ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ ದಶರಥರಾಯನ ಉದರದಿ ವಿಠಲ ಶಿಶುವಾಗಿ ಜನಿಸಿದ ಶ್ರೀರಾಮ ವಿಠಲ ಪಶುಪತಿ ಗೋಪಿಯ ಕಂದನೆ ವಿಠಲ ಅಸುರೆ ಪೂತನಿಯ ಕೊಂದ ವಿಠಲಗೆ ಕಂಡಿರ ಬೊಬ್ಬುರ ವೆಂಕಟವಿಠಲನ ಅಂಡಜವಾಹನ ಅಹುದೋ ನೀ ವಿಠಲ ಪಾಂಡುರಂಗ ಕ್ಷೇತ್ರ ಪಾವನ ವಿಠಲ ಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ