ಜ್ಞಾನವೊಂದೇ ಸಾಕು ಮುಕ್ತಿಗೆ -ಇ- 1
ನ್ನೇನು ಬೇಕು ಹುಚ್ಚುಮರುಳು ಮಾನವನೆ
ಪಿತ ಮಾತೆ ಸತಿ ಸುತರನಗಲಿರಬೇಡ 1
ಯತಿಯಾಗಿ ಆರಣ್ಯ ಚರಿಸಲು ಬೇಡ ||
ವ್ರತ - ನೇಮವ ಮಾಡಿ ದಣಿಯಲು ಬೇಡ !
ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ
ಜಪತಪವನೆ ಮಾಡಿ ಸೊರಗಲುಬೇಡ 1
ಕಪಿಯಂತೆ ಅಡಿಗಡಿಗೆ ಹಾರಲುಬೇಡ |
ಉಪವಾಸಪಾಶಕ್ಕೆ ಸಿಕ್ಕಲುಬೇಡ 1
ಚಪಲತನದಲೇನು ಫಲವಿಲ್ಲೋ ಮೂಢ
ಜಾಗರದಲಿ ನಿದ್ರೆ ಕೆಡಿಸಲು ಬೇಡ 1
ಓಗರವನು ಬಿಟ್ಟು ಒಣಗಲು ಬೇಡ ||
ಸೋಗುಮಾಡಿ ಹೊತ್ತು ಕಳೆಯಲು ಬೇಡ |
ಗೂಗೆ ಹಾಗೆ ಕಣ್ಣು ತಿರುಗಿಸಬೇಡ
ಹೊನ್ನು – ಹೆಣ್ಣು – ಮಣ್ಣು ಜರೆದಿರಬೇಡ |
ಅನ್ನ - ವಸ್ತ್ರಗಳನ್ನು ತೊರೆದಿರಬೇಡ ||
ಬಣ್ಣದ ದೇಹವ ನೆಚ್ಚಲುಬೇಡ ।
ತಣ್ಣೀರೊಳಗೆ ಮುಳುಗಿ ನಡುಗಲು ಬೇಡ
ಮಹಾವಿಷ್ಣುಮೂರ್ತಿಯ ಮರೆತಿರಬೇಡ |
ಸಾಹಸದಿಂದಲಿ ಶ್ರಮ ಪಡಬೇಡ |
ಕುಹಕಬುದ್ದಿಯಲಿ ಕುಣಿದಾಡಬೇಡ |
ಮಹಿಮ ಪುರಂದರವಿಠಲನ ಮರೆಯದಿರೊ ಮೂಢ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ