ಕೀರ್ತನೆ - 645     
 
ಹೊಲೆಯ ಹೊಲತಿ ಇವರವರಲ್ಲ ಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಸತಿಯಳ ವಶನಾಗಿ ಜನನಿ ಜನಕರಿಗೆ ಅತಿ ನಿಷ್ಠುರ ನುಡಿವವ ಹೊಲೆಯ ಸುತರ ಪಡೆದು ವಾರ್ಧಿಕ್ಯಮದವೇರಿ ಪತಿದ್ವೇಷ ಮಾಡುವಳೆ ಹೊಲತಿ ಗುರುಗಳಲ್ಲಿ ವಿದ್ಯೆಗಳನ್ನು ಕಲಿತು ಹಿರಿಯರ ಬಳಲಿಸುವವ ಹೊಲೆಯ ಪರಪುರುಷಗೊಲಿದು ತನ್ನ ಪುರುಷನ ವಿರಸವ ಮಾಡುವ ಕುಲಗೇಡಿತಾ ಹೊಲತಿ ಒಡೆಯನನ್ನವನುಂಡು ಅಡಿಗಡಿಗೆ ಬಾಯ್ ಬಿಡದೆ ತರ್ಕಿಸುವ ಜಡ ಹೊಲೆಯ ಬಡತನ ಬಂದರೆ ಪುರುಷನ ರಚ್ಚೆಗೆ ಬಿಡದೆ ತಹಳೆ ಶುದ್ಧ ಹೊಲತಿ ನೂರೊಂದು ಕುಲ ಕುಂಭೀಪಾಕಕಟ್ಟುವ ಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯ ಆರೊಳು ಕಲಹಾಪಸ್ಮಾರಿ ದುರ್ಮುಖಿಯು-ಕ ಠೋರಕುಮತಿ ಶುದ್ಧ ಹೊಲತಿ ಅಜನುತ ಪುರಂದರವಿಠಲನ ದಾಸರ ಭಜನೆಯ ದಾರಿಯ ಬಿಟ್ಟವ ಹೊಲೆಯ ನಿಜವರ್ಯರಾದ ಸಜ್ಜನರ ಪಾದಪದ್ಮವ ಭಜಿಸದಿರುವಳೆ ಶುದ್ಧ ಹೊಲತಿ