ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - 1
ಆಗಮವ ಬಲ್ಲವರು ತಿಳಿದೆಲ್ಲ ಪೇಳಿ
ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ-|
ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |
ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |
ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ
ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ ।
ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||
ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |
ಹಿಂಡು ಸತಿಯರ ದೃಷ್ಟಿ ಘನವಾಯಿತೇನೊ
ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |
ಕಲಕಿತನದಲಿ ಎನ್ನ ಕೊಲುವುದೇಕೋ ॥
ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |
ಚೆಲುವ ಸಿರಿ ಪುರಂದರವಿಠಲ ತಾ ಬಲ್ಲ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ