ಕೀರ್ತನೆ - 642     
 
ಹೆಣ್ಣ ನಿಚ್ಛಿಸುವರೆ ಮೂಢ - ಇದನು ಕಣ್ಣು – ಮೈ ಮನಗಳಿಂ ಸೋಂಕಲು ಬೇಡ ತಾಯಾಗಿ ಮೊದಲು ಪಡೆದಿಹುದು - ಮತ್ತೆ ಜಾಯೆಯೆಂದೆನಿಸಿ ಕಾಮದಿ ಕೆಡಹುವುದು ಕಾಯದಿ ಜನಿಸುತ ಬಹುದು - ಇಂತು ಮಾಯೆಯು ನಿನ್ನ ಬಹು ವಿಧದಿ ಕಾಡುವುದು ಹಿತಶತ್ರುವಾಗಿ ಹೊಂದುವುದು - ನಿಮಿಷ ರತಿಗೊಟ್ಟು ನಿತ್ಯಮುಕ್ತಿಯ ಸೆಳೆಯುವುದು ಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆ ಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು ಬಗೆಯದು ತನುವೆಲುವು ನರ ಖಂಡ ಅದರೊ ಳಗೆ ವಾಯುರಂಧ್ರ ಕಿಸುಕುಳದ ಉದ್ದಂಡ ಭಗವೆಂಬುದು ಮೂತ್ರದ ಭಾಂಡ-ಆದ ನೊಗಡಿಸದೆ ನಿಜಸುಖವಿಲ್ಲ ಕಂಡೆಯ ವಶನಾದ ವಾಲಿಯ ಕೊಲಿಸಿಹುದು ಹೆಸರು ಮಾತ್ರದಿ ದಶಶಿರನಳಿದಿಹುದು ಶಶಿಯಂಗದಲಿ ಕ್ಷಯವಿಹುದು ಹೆಸರು ಪಡೆದ ಕೀಚಕನನಳಿದಿಹುದು ಪಶುಪತಿಯ ದೆಸೆಗೆಡಿಸಿಹುದು - ಹೀಗೆ ವಸುಧೆಯೊಳು ಜೀವರ ಹಸಗೆಡಿಸಿಹುದು ವಸುಧೇಶನ ನಾಮ ಮರೆಸುವುದು - ನಮ್ಮ ಅಸಮ ಪುರಂದರವಿಠಲನ ತೊರೆಸುವುದು