ಕೀರ್ತನೆ - 636     
 
ಹರಿಯೆನ್ನು ಹರಿಯನ್ನು ಹರಿಯೆನ್ನು ಪ್ರಾಣಿ ಹರಿಯೆನ್ನದಿದ್ದರೆ ನರಹರಿಯಾಣೆ ಹೆಂಗಸು ಮಕ್ಕಳು ಹೆರವರು ಪ್ರಾಣಿ 1 ಸಂಗಡ ಬರುವವರೊಬ್ಬರ ಕಾಣೆ ದಾನವಿಲ್ಲದ ದ್ರವ್ಯ ಗಳಿಸಿದೆ ಪ್ರಾಣಿ ಪ್ರಾಣ ಹೋಗುವಾಗ ಕಾಣೆ ದುಗ್ಗಾಣಿ. ನೀರ ಮೇಲಿನ ಗುಳ್ಳೆ ಸಂಸಾರ ಪ್ರಾಣಿ ಸಾರಿದೆ ಪುರಂದರವಿಠಲನ ವಾಣಿ