ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |
ನರರೆಂದು ಬಗೆವವರೆ ನರಕವಾಸಿಗಳು
ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |
ಮಧುವೈರಿಗೊಲಿದ ಮನ ಮಣಿಕರ್ಣಿಕೆ ॥
ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |
ವದನವು ಅಯೋಧ್ಯೆಪುರವಾಗಿ ಇಹುದು
ನರಹರಿಯನೀಕ್ಷಿಸುವ ನಯನ ದ್ವಾರಾವತಿಯು |
ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ |
ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |
ಸಿರಿಧರೆಗೆ ಎರಗುವಾ ಶಿರವೆ ಬದರಿ
ಚಕ್ರಧರಗೆ ಪೋಪ ಚರಣ ಮಾಯಾವತಿ ತ್ರಿ - 1
ವಿಕ್ರಮನ ಪೂಜಿಸುವ ಕರವೆ ಕಂಚಿ ॥
ಅಕ್ರೂರಗೊಲಿದ ಸಿರಿ ಪುರಂದರವಿಠಲನ
ಸಕ್ಕೃಪೆಯು ಉಳ್ಳವರ ಅಂಗ ಸಾಯುಜ್ಯವು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ