ಹರಿ ನಿನ್ನೊಲುಮೆಯು ಆಗುವತನಕ |
ಅರಿತು ಸುಮ್ಮಗಿರುವುದೆ ಲೇಸು
ಮರಳಿ ಮರಳಿ ತಾ ಪಡೆಯದ ಭಾಗ್ಯವು |
ಮರುಗಿದರೆ ತನಗಾದೀತೆ ?
ದೂರು ಬರುವ ನಂಬಿಗೆಯನು ಕೊಟ್ಟರೆ |
ದುರ್ಜನ ಬರುವುದು ತಪ್ಪಿತೆ |
ದೂರ ನಿಂತು ಮೊರೆಯಿಟ್ಟು ಕೂಗಿದರೆ |
ಚೋರರಿಗೆ ದಯ ಪುಟ್ಟೀತೆ ।
ಜಾರನಾರಿ ತಾ ಪತಿವ್ರತೆ ಎನ್ನಲು |
ಜಾಣರಿಗೆ - ನಿಜ ತೋರೀತೆ ||
ಊರ ಬಿಟ್ಟು ಬೇರೂರಿಗೆ ಹೋದರೆ |
ಪ್ರಾರಬ್ಧವು ಬೇರಾದೀತೆ
ಪಾಟುಪಡುವುದು ಪಣೆಯಲ್ಲಿರಲು |
ಪಟ್ಟೆಮಂಚ ತನಗಾದೀತೆ ||
ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |
ಹುಟ್ಟು ಬಂಜೆಗೆ ಮಕ್ಕಳಾದೀತೆ ?"
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ !
ಬೇಟೆಗಾರಗೆ ದಯ ಪುಟ್ಟೀತೆ |
ಕೆಟ್ಟ ಹಾವು ತಾ ಕಚ್ಚಿದ ವಿಷವದು |
ಬಟ್ಟೆಯಲೊರಸಲು ಹೋದೀತೆ
ಧನಿಕನ ಕಂಡು ಪಾಡಿ ಪೊಗಳಿದರೆ
ದಾರಿದ್ರ್ಯವು ತಾ ಹಿಂಗೀತೆ ||
ದಿನದಿನ ನೊಸಲೊಳು ನಾಮವನಿಟ್ಟರೆ |
ದೇವರಿಗೆ ತೃಪ್ತಿಯಾದೀತೆ |
ಎಣಿಸಿಕೊಂಡು ಎಳೆ ಹಂಜಿಯ ನೂತರೆ
ಅಣೆಯದ ಸಾಲವು ತೀರೀತೆ ।
ಅನುದಿನದಲಿ ಶ್ರೀ ಪುರಂದರವಿಠಲನ |
ನೆನೆಯದಿದ್ದರೆ ಭವ ಹಿಂಗೀತೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ