ಕೀರ್ತನೆ - 628     
 
ಹರಿದಾಡುವಂಥ ಮನವ ನಿಲಿಸುವುದು ಬಹುಕಷ್ಟ ಕಾಶಿಗೆ ಹೋಗಲುಬಹುದು ದೇಶ ತಿರುಗಲುಬಹುದು ಆಶೆ ಸುಟ್ಟು ತಾನಿರಬಹುದು ಜಪವ ಮಾಡಲುಬಹುದು ತಪವ ಮಾಡಲುಬಹುದು ಉಪವಾಸದಲ್ಲಿ ತಾನಿರಬಹುದು ಸ್ನಾನ ಮಾಡಲುಬಹುದು ದಾನ ಮಾಡಲುಬಹುದು ಧ್ಯಾನದಿ ಪುರಂದರವಿಠಲನ ಚರಣದಿ