ಕೀರ್ತನೆ - 627     
 
ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ | ಹರಿ ಕೊಡದ ಕಾಲಕ್ಕೆ ಬಾಯಿಬಿಡುವೆಯೊ ಪ್ರಾಣಿ ಉಡಲಿಲ್ಲ ಉಣಲಿಲ್ಲ ಕೊಡಲಿಲ್ಲ ಧರ್ಮವ | ಅಡಗಿಸಿ ಇಟ್ಟಿಹೆ ಮಣ್ಣೊಳಗೆ ॥ ಬಡತನ ಬಂದು ಕಂಬಳಿ ಹೊದೆವಾಗ 1 ತುಡುಗು ನಿನ್ನ ಜನ್ಮ ಸುಡು ಕಾಣೋ ಖೋಡಿ ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ 1 ಗುಗ್ಗರಿಯನು ಮಾಡಿ ತಿನ್ನುವಿಯೊ || ವೆಗ್ಗಳವಾದ ಯಮದೂತರು ಎಳೆವಾಗ | ಬುಗ್ಗೆಯ ಹೊಡ್ಕೊಂಡು ಹೋದೆಯೊ ಖೋಡಿ ನಂಟರು - ಬಂಧುಗಳೂರೊಳಗಿರಲಿಕ್ಕೆ 1 ಕುಂಟು ಸುದ್ದಿಗಳನು ಆಡುವೆ ನೀ ॥ ಕಂಟಕರಾದ ಯಮದೂತರು ಎಳೆವಾಗ । ನಂಟ ಪುರಂದರವಿಠಲನ ದ್ರೋಹಿ