ಕೀರ್ತನೆ - 625     
 
ಹರಿಕಥಾ ಶ್ರವಣ ಮಾಡೊ ನಿರಂತರ ಪರಗತಿಗಿದು ನಿರ್ಧಾರ ನೋಡೊ ಸರಸಿಜನಾಭನ ಸರ್ವದಾ ಹೊಗಳುತ ದುರಿತ ದೂರಕೀಡಾಡೊ – ಮನುಜಾ ಜ್ಞಾನ - ಭಕುತಿ - ವೈರಾಗ್ಯವೀವ ನಮ್ಮ ಆನಂದತೀರ್ಥರ ಪಾಡೊ ಮನುಜಾ ಪರಮಪುರುಷ ಶ್ರೀ ಪುರಂದರವಿಠಲನ ಚರಣಕಮಲಗಳ ಕೂಡೊ - ಮನುಜಾ