ಕೀರ್ತನೆ - 613     
 
ಸ್ಮರಣೆಯೊಂದೆ ಸಾಲದೆ ಸ್ಮರಣೆಯೊಂದೆ ಸಾಲದೆ ಪರಿಪರಿ ಸಾಧನ ಭ್ರಾಂತಿಯ ಬಿಡಿಸುವ ಪರಮಾತ್ಮನ ಪಾದ ನೆರೆನಂಬಿದವರಿಗೆ ಕಡುಮೂರ್ಖನಾದರೇನು ದಾನ-ಧರ್ಮ ಕೊಡದಾತನಾದರೇನು || ಬಡವನಾದರೇನು ವಿಜಾತಿಯಾದರೇನು | ಒಡನೆ ಪ್ರಹ್ಲಾದನ್ನುದ್ಧರಿಸಿದ ಶ್ರೀಹರಿಯ ಪಾತಕಿಯಾದರೇನು - ಸರ್ವಲೋಕ - ಘಾತಕಿಯಾದರೇನು || ಮಾತೆಯಂದದಿ ತನ್ನ ದಾಸರ ಸಲಹುವ । ಚೇತನಾತ್ಮಕನ ಪಾದವ ನಂಬಿದವರಿಗೆ ಪಾತಕ ವೆಗ್ಗಳವೊ - ನಾಮವು ಪ್ರಾಯ - ಶ್ಚಿತ್ತಕೆ ವೆಗ್ಗಳವೊ ಪಾತಕವೆನಗಿಲ್ಲ ಪ್ರಾಯಶ್ಚಿತ್ತ ಮುನ್ನಿಲ್ಲ | ಏತರ ಭಯವಯ್ಯ ಪುರಂದರವಿಠಲನ