ಕೀರ್ತನೆ - 612     
 
ಸಂಗವೇತಕೆ ಅಲ್ಪರೊಡನೆ ಗುಣವಿಲ್ಲ ಮಂಗ ಮನುಜನ ಕೂಡ ಮಾತಾಡಸಲ್ಲ ಪರರ ಕೆಣಕಿ ತನ್ನ ಹಿರಿಯತನ ಕೆಡಲೇಕೆ ಹರಕೆಯಿಲ್ಲದ ಮೇಲೆ ಹಾರಯಿಸಲೇಕೆ ಮುರುಕು ಮನೆಯಲಿ ತಾ ಕಷ್ಟವ ಪಡಲೇಕೆ ಸರಿಬಾರದವರೊಡನೆ ಸರಸ ಮಾತುಗಳೇಕೆ ತೊತ್ತಿನ ಕೂಡಾಡಿ ಅತಿದೀಕ್ಷೆ ಕೆಡಲೇಕೆ ಹೊತ್ತಿಗಲ್ಲದವನ ಕೂಡ ಗೆಳೆತನದ ಮಾತೇಕೆ ರತ್ನವನು ನಾಯ ಕೊರಳಿಗೆ ಸುತ್ತಿ ಬಿಡಲೇಕೆ ಕತ್ತೆಯ ಮೇಲೇರಿ ಕೆಡಲೇಕೆ ಮನುಜಾ ನೆಲೆ ತಪ್ಪಿದ ಮೇಲೆ ನಂಟ - ಬಂಧುಗಳೇಕೆ ಸಲುಗೆಯಿಲ್ಲದ ಮೇಲೆ ಛಲವು ತನಗೇಕೆ ಬುಲುದೈವ ಪುರಂದರವಿಠಲನಿರಲಿಕ್ಕೆ ಹಲವು ದೈವದ ಗೊಡವೆ ನಮಗೇಕೆ ಮನುಜಾ