ಕೀರ್ತನೆ - 610     
 
ಸತ್ಯವೇ ಸ್ನಾನ ಜಪ ನೇಮ - ಹೋಮ - ಅ - ಸತ್ಯದಲಿ ನಡೆದು ಮಾಳ್ಪುದು ವ್ಯರ್ಥಕರ್ಮ ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು ಒಪ್ಪದಲಿ ಉಪವಾಸ ವ್ರತವ ಮಾಡಿ | ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ ಸರ್ಪಗಳು ಮಾಡಿದಪರಾಧವೇನಯ್ಯ ? ಬಿಡದೆ ಮದ ಮತ್ಸರಾಹಂಕಾರದೊಳು ಮುಳುಗಿ | ಒಡನೆ ಬೆರಳುಗಳೆಣಿಸಿ ಮೌನದಿಂದ || ತಡೆಯದಲೆ ಪರಲೋಕ ಸುಖವನೈದುವೆನೆಂಬ । ಬಡ ಬಕವು ಮಾಡಿದಪರಾಧವೇನಯ್ಯ ಪರಸತಿಯು ಪರಧನವು ಪರನಿಂದೆ ಪರಹಿಂಸೆ । ಪರಮ ಪಾತಕದ ಕಾರಣವ ತೊರೆದು || ಧರೆಗಧಿಕ ಪುರಂದರ ವಿಠಲನ ನೆರೆಭಜಿಸಿ | ವರವನು ಪಡೆಯೆ ಸಾಲೋಕ್ಯವನ್ನೀವ