ವ್ಯರ್ಥವಲ್ಲವೆ - ಜನುಮ ವ್ಯರ್ಥವಲ್ಲವೆ
ತೀರ್ಥಪದನ ಭಜಿಸಿ ತಾ ಕೃ - 1
ತಾರ್ಥನಾಗದವನ ಜನುಮ
ಒಂದು ಶಂಖವುದಕದಿಂದ |
ಚೆಂದದಲಭಿಷೇಕ ಮಾಡಿ |
ಗಂಧ-ಪುಷ್ಪ ಹರಿಗೆ ಅರ್ಪಿಸಿ |
ವಂದನೆ ಮಾಡದವನ ಜನುಮ
ಮುಗುಳುದೆನೆಯ ಎಳೆ ತುಳಸಿ ದ - 1
ಳಗಳ ತಂದು ಪ್ರೇಮದಿಂದ
ಜಗನ್ಮೋಹನನ ಪೂಜೆಯ ಮಾಡಿ |
ಚರಣಕೆರಗದವನ ಜನುಮ
ಕಮಲ ಮಲ್ಲಿಗೆ ಸಂಪಿಗೆ ಜಾಜಿ ।
ವಿಮಲ ಕೇದಗೆ ಪ್ರೇಮದಿಂದ
ಕಮಲನಾಭನ ಅರ್ಚನೆ ಮಾಡಿ |
ಕರವ ಮುಗಿಯದವನ ಜನುಮ
ಪಂಚಭಕ್ಷ್ಯೆ ಪಾಯಸ ಘೃತ ।
ಪಂಚಾಮೃತ ಹರಿಗರ್ಪಿಸದೆ ||
ಮುಂಚೆ ಉಂಡು ಹೊರಗೆ ತಾ ಪ್ರ - 1
ಪಂಚಮಾಡುವವನ ಜನುಮ
ಸಜ್ಜನಸಂಗ ಮಾಡದವನ |
ದುರ್ಜನ ಸಂಗವ ಬಿಡದವನ
ಅರ್ಜುನಸಖ ಪುರಂದರ |
ವಿಠಲನನ್ನು ಭಜಿಸಿದವನ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ