ಕೀರ್ತನೆ - 602     
 
ವರುಷ ಕಾರಣವಿಲ್ಲ ಹರಿಭಜನೆಗೆ | ಅರಿತ ಸಜ್ಜನರೆಲ್ಲ ಕೇಳಿ ಸಮ್ಮುದದಿ ತರಳತನದಲಿ ಕಂಡ ಹರಿಯ ಧ್ರುವರಾಯನು | ಹಿರಿಯ ತಾನವನಯ್ಯ ಕಂಡನೇನೊ ? || ತರಳ ಪ್ರಹ್ಲಾದ ನರಹರಿಯನು ತಾ ಕಂಡ | ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ 1 ಇರುಳುಗಣ್ಣಿನ ಗೂಗೆ ತಾ ದೊಡ್ಡದೆ ? । ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ । ಮರಿ ದೊಡ್ಡದೆಂತೆಂದು ಪೇಳುವರು ಬುಧರು ಸರುವದಾ ಒದರುವರು ಅರಣ್ಯವಾಸಿಗಳು | ಮರದಡಿಗೆ ಬಿದ್ದ ಎಲೆಗಳ ತಿನ್ನುತ । ಪರಮಪಾತಕಿ ಅಜಾಮಿಳನು ನಾರಗ ಎನಲು | ಭರದಿಂದ ಸಲುಹಿದನು ಪುರಂದರವಿಠಲ