ಕೀರ್ತನೆ - 601     
 
ವರತೀರ್ಥರಾಜ ಪ್ರಯಾಗವೆನಿಸುವ ಕ್ಷೇತ್ರ ದೊರೆ ಮಾಧವನ ಭಜಿಸಿರೈ ಆ ಮಾಘಮಾಸದತಿಶಯವಾದ ಸ್ನಾನವನು | ಈ ಮಹಾನದಿಯೊಳಗೆ ಮಾಡಲೋಸುಗ ಬೊಮ್ಮ | ಸೋಮಶೇಖರ ಮುಖ್ಯ ದೇವತೆಗಳ್ವೆತಹರು | ಪ್ರೇಮದಿಂದಲಿ ನಿರುತ | ನೇಮವಿದು ದ್ವಿಜಕುಲೋತ್ತಮರಾದವರು ಕೇಳಿ | ಕಾಮ - ಕ್ರೋಧವ ಜರಿದ ಪ್ರಯಾಗ ಕ್ಷೇತ್ರದಲಿ | ರಾಮಣೀಯಕ ಸ್ನಾನನುಷ್ಠಾನ ತೀರ್ಥವಿಧಿ । ಹೋಮಗಳ ಮಾಡಿರಯ್ಯ ಆರ್ಯಾವರ್ತದ ಬ್ರಹ್ಮವರ್ತ ದೇಶದ ಮಧ್ಯೆ | ಧಾರ್ಯವಾದಲೆ ಪುಣ್ಯವಾರಾಣಾಸೀ ಕ್ಷೇತ್ರ । ಕಾರ್ಯವಿಶ್ವೇಶತಾರಕ ಮಂತ್ರವುಪದೇಶಿ । ಸೂರ್ಯಚಂದ್ರಾಗ್ನಿನಯನ|| ತ್ವರ್ಯುಗ್ರನೆನಿಪ ಭೂತೇಶ ಭೈರವನಲ್ಲಿ | ವೀರ್ಯದಿಂದಘಕಾರಿ ಜೀವಿಗಳ ಶಿಕ್ಷಿಸುವ| ಶೌರ್ಯ ಅಗಣಿತ ಮಹಿಮ ಶ್ರೀ ಬಿಂದುಮಾಧವಗೆ ಕಾರ್ಯದೊರೆತನವು ಅಲ್ಲಿ ಅರ್ತಿಯಲಿ ಪಂಚಗಂಗೆಯಲಿ ಮಜ್ಜನಮಾಡಿ | ನಿತ್ಯ ನೈಮಿತ್ತ್ಯ ಕರ್ಮಂಗಳನು ಪತಿಕರಿಸಿ ॥ ಸುತ್ತಿ ಅಂತರ್ವೇದಿಯನ್ನು ಪಂಚಕ್ರೋಶ - 1 ಯಾತ್ರೆಗಳ ಮಾಡಿ ಬಳಿಕ ॥ ಮತ್ತೆ ಶ್ರೀ ವಿಶ್ವೇಶ್ವರಗೆ ಪ್ರದಕ್ಷಿಣೆ ಮಾಡಿ | ಭಕ್ತಿಪೂರ್ವಕವಾಗಿ ಅಲ್ಲಲ್ಲಿ ಇಹ ವೈಷ್ಣ - ವೋತ್ತಮರಿಗೆರಗಿ ಸದ್ದರ್ಮಗಳ ಮಾಡಿ - ಕೃತ ಕೃತ್ಯರೆಂದೆನಿಸಿದರಯ್ಯ