ಕೀರ್ತನೆ - 599     
 
ವಂದಿಸಿದವರೆ ಧನ್ಯರು - ನಮ್ಮ - 1 ಇಂದಿರಾಪತಿಗಡ್ಡಬೀಳುತಲೊಮ್ಮೆ ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ | ಒಂದೊಂದು ನಾಮವ ನೆನೆಯುತಲಿ || ಮಂದರೋದ್ಧರನನು ಕುಂದದೆ ಪೂಜಿಸಿ | ವಂದಿಸುವಾನಂದದಿಂದ ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ | ವಿಟ್ಠಲ ವಿಟ್ಠಲ ಎನುತ ಮನ - || ಮುಟ್ಟಿ ಮಾಡುವ ಭಕ್ತಿ - ಸ್ತೋತ್ರ - ಸ್ತುತಿಗಳಿಂದ | ಅಷ್ಟಾಂಗದಲಿ ವಂದನೆಯ ಮಾಡುತಲಿ ಸಿರಿಲಕ್ಷ್ಮೀಪತಿ ಶರಣಾಗತರನು | ಕರುಣಿಸೆಂದೆನುತ ಕರವ ಮುಗಿದು || ಹರುಷ ಪುಳಕದಿಂದ ಮರೆತು ದೇಹವನು ಶ್ರೀ - | ಪುರಂದರವಿಠಲರಾಯನ ಚರಣಕೆ