ಕೀರ್ತನೆ - 598     
 
ಲೊಳಲೊಟ್ಟೆ ಬದುಕು ಲೊಳಲೊಟ್ಟೆ ಆನೆ ಕುದುರೆ ಮಂದಿ ಲೊಳಲೊಟ್ಟೆ -బలు ಸೈನ್ಯ ಭಂಡಾರವು ಲೊಳಲೊಟ್ಟೆ ॥ ಮಾನಿನಿಯರ ಸಂಗ ಲೊಳಲೊಟ್ಟೆ-ಮಹಾ 1 ಮಾನ್ಯ - ವಿಜಯರೆಲ್ಲ ಲೊಳಲೊಟ್ಟೆ ಮುತ್ತು -ಮಾಣಿಕ- ಚಿನ್ನ- ಲೊಳಲೊಟ್ಟೆ-బలు ಛತ್ರ ಚಾಮರಗಳು ಲೊಳಲೊಟ್ಟೆ ॥ ಸುತ್ತಗಳು ಕೋಟೆಯು ಲೊಳಲೊಟ್ಟೆ - ಅಲ್ಲಿ 1 ಸುತ್ತುವ ಜನವೆಲ್ಲ ಲೊಳಲೊಟ್ಟೆ ನೆಂಟರು ಇಷ್ಟರು ಲೊಳಲೊಟ್ಟೆ - ದೊಡ್ಡ 1 ಕಂಟಕಾನಾಹೊದು ಲೊಳಲೊಟ್ಟೆ ॥ ಉಂಟಾದ ಗುಣನಿಧಿ ಪುರಂದರವಿಠಲನ । ಬಂಟನಾಗದವ ಲೊಳಲೊಟ್ಟೆ