ಕೀರ್ತನೆ - 597     
 
ರೊಕ್ಕ ಎರಡಕ್ಕೆ ದುಃಖ ಗಕ್ಕನೆ ಹೋದರೆ ಘಾತ ಕಾಣಕ್ಕ ಚಿಕ್ಕತನಕೆ ತಂದು ಕೆಡಿಸುವುದು ರೊಕ್ಕ ಮಕ್ಕಳ ಮರಿಗಳ ಮಾಳ್ಪದು ರೊಕ್ಕ ಸಕ್ಕರೆ ತುಪ್ಪವ ಸಲಿಸುವುದು ರೊಕ್ಕ ಕಕ್ಕುಲಾತಿಗೆ ತಂದು ಕೆಡಿಸುವುದು ರೊಕ್ಕ ಕುಂಟರ ಕುರುಡರ ಕುಣಿಸುವುದು ರೊಕ್ಕ ಗಂಟು ಮಾಡಲಿಕ್ಕೆ ಕಲಿಸುವುದು ರೊಕ್ಕ ಬಂಟರನೆಲ್ಲ ವಶ ಮಾಡುವುದು ರೊಕ್ಕ ತುಂಟತನಕೆ ತಂದು ನಿಲಿಸುವುದು ರೊಕ್ಕ ಇಲ್ಲದ ಗುಣಗಳ ಕಲಿಸುವುದು ರೊಕ್ಕ ಸಲ್ಲದ ನಾಣ್ಯವ ಸಲಿಸುವುದು ರೊಕ್ಕ ಬೆಲ್ಲದಕ್ಕಿಂತಲೂ ಸವಿಯಾದ ರೊಕ್ಕ ಕೊಲ್ಲಲಿಕ್ಕೆ ಕಾರಣವಾಯಿತು ರೊಕ್ಕ ಉಂಟಾದ ಗುಣಗಳ ಬಿಡಿಸುವುದು ರೊಕ್ಕ ನಂಟರ ಇಷ್ಟರ ಮಾಡುವುದು ರೊಕ್ಕ ಒಂಟೆ - ಆನೆ ಕುದುರೆ ತರಿಸುವುದು ರೊಕ್ಕ ಕಂಟಕಗಳನೆಲ್ಲ ಬಿಡಿಸುವುದು ರೊಕ್ಕ ವಿದ್ವಜ್ಜನರ ವಶ ಮಾಡುವುದು ರೊಕ್ಕ ಹೊದ್ದಿದವರನು ಹೊರೆವುದು ರೊಕ್ಕ ಮುದ್ದು ಪುರಂದರವಿಠಲನ ಮರೆಸುವ ಬಿದ್ದು ಹೋಗುವ ರೊಕ್ಕ ಸುಡು ನೀನಕ್ಕ