ಕೀರ್ತನೆ - 596     
 
ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಲು ಸಿಂಧು ಸುತೆಯ ಪತಿಯಧ್ಯಾನ ಎಂದಿಗಲ್ಲಿ ದೊರೆಯದೊ ಭರದಿ ಯಮನ ಭಟರಾಗಲೆ ಹೊರಡು ಎಂದು ಮೆಟ್ಟಿ ತುಳಿಯೆ ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದೊ ದೋಷ ಕ್ಷೇಶ - ದುಃಖವೆಂಬ ಶ್ಲೇಷ್ಮದಲ್ಲಿ ಸಿಕ್ಕಿ ಇರಲು ವಾಸುದೇವ ಕೃಷ್ಣನೆಂಬು ದಾಸಮಯಕ್ಕೆ ದೊರೆಯದೊ ಸಿಂಗಾರವಾದ ದೇಹವೆಲ್ಲ ಅಂಗವಳಿದು ಮುರಿದು ಬೀಳೆ ॥ ಅಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನವು ದೊರೆಯದೊ ಕೆಟ್ಟ ಕೆಟ್ಟರಲ್ಲೊ ಬರಿದೆ ಕಟ್ಟ ಕಡೆಯಲ್ಲಿ ಕಾಯ ಬಿಟ್ಟು ಹೋಗುವಾಗ ಪುರಂದರ ವಿಠಲ ಧ್ಯಾನ ದೊರೆಯದೊ