ರಾಮ ಮಂತ್ರವ ಜಪಿಸೊ-ಏ ಮನುಜಾ ಶ್ರೀ
ರಾಮ ಮಂತ್ರವ ಜಪಿಸೊ
ಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡ
ಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ
ಛಲದಿ ಬೀದಿಯೊಳು ಉಚ್ಚರಿಪ ಮಂತ್ರ |
ಹಲವು ಪಾತಕಗಳ ಹಸನಗೆಡಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ
ಸನುಮುನಿಗಳಿಗೆಲ್ಲ ಸಲುಗೆಯಾಗಿಹ ಮಂತ್ರ
ಮನುಮುನಿಗಳಿಗೆಲ್ಲ ಮೌನ ಮಂತ್ರ || 1
ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರ
ಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ
ಸಕಲ ವೇದಗಳಿಗೆ ಸಾರವಾಗಿಹ ಮಂತ್ರ
ಮುಕುತಿ ಪಥಕೆ ಇದು ಮೂಲಮಂತ್ರ |
ಶಕುತ ಪರಕೆ ಇದು ಬಟ್ಟೆದೋರುವ ಮಂತ್ರ
ಸುಖನಿಧಿ ಪುರಂದರವಿಠಲ ಮಹಾಮಂತ್ರ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ