ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ ಎನಬಾರದೆ
ದಾರಿಯ ನಡೆಯುತ ಭಾರವ ಹೊರುವಾಗ ಕೃಷ್ಣಾ ಎನಬಾರದೆ
ತಿರುಗಾಡುತ ಮನೆಯೊಳಗಾದರು ಒಮ್ಮೆ - ಕೃಷ್ಣಾ
ಪರಿಪರಿ ಕೆಲಸದೊಳಿದುವೊಂದು ಕೆಲಸವು - ಕೃಷ್ಣಾ
ಮಲಗಿಯೆದ್ದು ಮೈಮುರಿದೇಳುತಲೊಮ್ಮೆ - ಕೃಷ್ಣಾ
ಹಲವು ಯೋಚಿಸುತಲಿ ಮಂದಿರದಲಿ ಒಮ್ಮೆ - ಕೃಷ್ಣಾ
ಚೆಂದುಳ್ಳ ಹಾಸಿಗೆ ಮೇಲೆ ಕುಳಿತು ಒಮ್ಮೆ ಕೃಷ್ಣಾ
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ - ಕೃಷ್ಣಾ
ಗಂಧವ ಪೂಸಿ ತಾಂಬೂಲ ಮೆಲ್ಲುತಲೊಮ್ಮೆ - ಕೃಷ್ಣಾ
ಮಂದಗಮನೆಯೊಳು ಸರಸವಾಡುತಲೊಮ್ಮೆ - ಕೃಷ್ಣಾ
ಕ್ಷೀರಸಾಗರ ಶಯನ ನೀನೇ ಗತಿಯೆಂದು ಕೃಷ್ಣಾ
ದ್ವಾರಕಾಪುರವಾಸ ಪುರಂದರ ವಿಠಲ ಕೃಷ್ಣಾ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ