ಕೀರ್ತನೆ - 591     
 
ಮೂಢ ಬಲ್ಲನೆ ಜ್ಞಾನ - ದೃಢ ಭಕುತಿಯ ? ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಕೋಣ ಬಲ್ಲುದೆ ವೇದಗಳನೋದಿ ಪಠಿಸಲಿಕೆ ಗೋಣಿ ಬಲ್ಲುದೆ ಎತ್ತಿನಾ ದುಃಖವ ಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆ ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ ? ಬಧಿರ ಕೇಳುವನೆ ಸಂಗೀತವನು ಪಾಡಿದರೆ ? ಚದುರ ಮಾತುಗಳಾಡುವನೆ ಮೂಕನು ? ಕ್ಷುಧೆಯಿಲ್ಲದವನು ಅಮೃತಾನ್ನವನು ಸವಿಯುವನೆ ? ಮಧುರ ವಚನವ ನುಡಿವನೇ ದುಷ್ಟ ಮನುಜ ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ? ನಿಜಭಕುತಿ ಮುಕುತಿ ಸುಖವನ್ನು ಕೊಡುವ ಭುಜಗೇಂದ್ರಶಯನ ಶ್ರೀ ಪುರಂದರವಿಠಲನ ಭಜಿಸಲಿಕ್ಕರಿಯದವ ಕಡು ಪಾಪಿ ಮನುಜ