ಕೀರ್ತನೆ - 587     
 
ಮಾವನ ಮನೆಯೊಳಗೆ ಕೋವಿದರಿರಬಹುದೆ ಹಾವ ಹಿಡಿಯಲು ಬಹುದು ಹರಣ ನೀಡಲು ಬಹುದು । ಬೇವ ಕಿಚ್ಚನು ಹಿಡಿದು ನುಂಗಬಹುದು || ಭಾಮೆಯ ತಂದ ಮನೆಯಲಿ ಜೀವಿಪುದಕಿಂತ ಸಾವುದೇ ಲೇಸು ಅಭಿಮಾನಿಗಳಿಗೆ ಪರರ ಸೇರಲುಬಹುದು ಪತಿತರಲ್ಲಿರಬಹುದು | ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು || ತರುಣಿಯ ತಂದೆಯ ಮನೆಯವಾಸಕ್ಕಿಂತ । ತರುಗಿರಿಗುಹೆಗಳಲ್ಲಿ ಇದ್ದು ಜೀವಿಸಬಹುದು ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು 1 ಹೇವವನಿಕ್ಕಿ ಚೂರ್ಣವ ಮಾಡಲು || ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದು ಮಾವ ಹೊರಗಾಡುವನು ಚಿಕ್ಕ ನುಡಿಗಳನು ಒಂದೊಂದು ತೆಂಗಳೊಳು ಬಹುಮಾನ ನಡತೆಗಳು | ಒಂದೆರಡು ತಿಂಗಳೊಳಗೆ ಹಿತವಾದವು ॥ ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು । ಸಂದೇಹವೇಕೆ ಸಂಸಾರಿಗೂ ಈ ಪರಿಯಲುಂಬಂಥ ಅಳಿಯ ಭೋಜನದಿಂದ | ಗೋಪಾಳ ಲೇಸು ಅಭಿಮಾನಿಗಳಿಗೆ || ಶ್ರೀಪತಿ ನಮ್ಮ ಪುರಂದರವಿಠಲನ ಈ ಪರಿ ಭಜಿಸಿ ಸುಖಿಯಾಗೊ ಮನವೆ