ಕೀರ್ತನೆ - 586     
 
ಮಾನಹೀನರಿಗೆ ಅಭಿಮಾನವೇಕೆ - ಪ್ರ ಧಾನಿಯಿಲ್ಲದ ಅರಸುತನವೇಕೆ ಕೃಷ್ಣಾ ಕಾಡಿನೊಳು ತಿರುಗುವಗೆ ಕನಕ ಭೂಷಣವೇಕೆ ಓಡಿನಲಿ ಉಂಬುವಗೆ ಹರಿವಾಣವೇಕೆ ಬೇಡಿದರೆ ಕೊಡದ ಲೋಭಿಗೆ ಬಿಂಕವೇಕೆ ಪಾಡಲರಿಯದೆ ಪ್ರೌಢತನವೇಕೆ ಕೃಷ್ಣಾ ಪತಿ ಮೀರಿ ನಡೆವಳ ವ್ರತ ನೇಮತನವೇಕೆ ಸತಿಗಳುಕಿ ನಡೆವವಗೆ ಸ್ವಾತಂತ್ರ್ಯವೇಕೆ ಮತಿಗೆಟ್ಟು ತಿರುಗುವಗೆ ಮಂತ್ರ-ತಂತ್ರಗಳೇಕೆ ಅತಿಯಾಸೆ ಬಿಡದ ಸಂನ್ಯಾಸಿ ತಾನೇಕೆ ಕಾಮವಿಲ್ಲದವರಿಗೆ ಕಾಂತೆಯರ ಗೊಡವೇಕೆ ಪ್ರೇಮವಿಲ್ಲದ ಬಂಧು ಬಳಗವೇಕೆ ಸ್ವಾಮಿ - ಶ್ರೀ ಪುರಂದರವಿಠಲನ ನೆನೆಯದ ತಾಮಸದ ಜನರಿಗೆ ಕೈವಲ್ಯವೇಕೆ