ಕೀರ್ತನೆ - 580     
 
ಮರೆಯದೆ ಮನದಲಿ ಸಿರಿವರನ ಚರಣವನು ಸ್ಮರಿಸಿದಂಥವರನ್ನು ನರರೆನ್ನಬಹುದೆ ? ಮುರಹರನಿಗೆರಗುವ ಶಿರವು ದ್ವಾರಕಾಪುರವು ಹರಿಕಥೆ ಕೇಳುವ ಕರ್ಣ ಗೋಕರ್ಣವು ಬಿರುದು ಪೊಗಳುವ ಜಿಹ್ವೆ ಸ್ಥಿರದಿ ಕ್ಷೀರಾರ್ಣವ ವರದನ ಪೂಜಿಪ ಕರವು ರಾಮೇಶ್ವರವು ಸೃಷ್ಟೀಶ ನಿರ್ಮಾಲ್ಯ ಗ್ರಹಣ ನಾಸಿಕ ಕಾಶಿ ಕೃಷ್ಣನ ನೋಡುವ ದೃಷ್ಟಿ ಶ್ರೀಮುಷ್ಣವು ಅಷ್ಟಮದಗಳ ಜರೆದ ಮುಖ ಮಥುರಾಪುರ ವಿಷ್ಣುವನು ಪಾಡುವ ಕಂಠ ಭೂವೈಕುಂಠ ಪರಕೆ ನಡೆಸುವ ಜಂಘ ಹರಿವ ಗಂಗೆಯು ಈ ಪರಿಯಲೊಪ್ಪುವ ಅಂಗ ಶ್ರೀರಂಗವು ಧರೆಯೊಳು ಪುರಂದರ ವಿಠಲರಾಯನ ಪರಮ ಭಾಗವತರ ಉದರವೆ ಬದರಿ